ಕರ್ನಾಟಕ II ಮಿನಿ ಒಲಂಪಿಕ್‍ ಗೇಮ್ಸ್ - ೨೦೨೨


ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ​​2022 ರ ಮೇ 16 ರಿಂದ 22 ರವರೆಗೆ II ಮಿನಿ ಒಲಿಂಪಿಕ್‍ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಇದು ಭಾರತದ ಮೊಟ್ಟ ಮೊದಲ ಮಿನಿ ಒಲಂಪಿಕ್ ಪಂದ್ಯಾವಳಿಯಾಗಿರುತ್ತದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ 3500 ಕ್ಕೂ ಹೆಚ್ಚು ಕ್ರೀಡಾಪಟುಗಳು ಕರ್ನಾಟಕದಾದ್ಯಂತ 21 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮಿನಿ ಒಲಂಪಿಕ್‍ ಕ್ರೀಡಾಕೂಟವು ಯುವ ಕ್ರೀಡಾಪಟುಗಳ ಮುಂದಿನ ಪಂದ್ಯಾವಳಿಗಳಿಗೆ ಸ್ಪೂರ್ತಿಯಾಗಿರುತ್ತದೆ. ಸದರಿ ಕ್ರೀಡಾಕೂಟವು ಕ್ರೀಡಾಪಟುಗಳ ಸ್ಪರ್ಧೆ ಮತ್ತು ಪ್ರದರ್ಶನದ ಪ್ರಮುಖ ಕೌಶಲ್ಯಗಳನ್ನು ಕಲಿಯಲು ಪ್ರಮುಖ ವೇದಿಕೆಯಾಗಿದೆ, ಕ್ರೀಡಾಪಟುಗಳು ಮಿನಿ ಒಲಂಪಿಕ್‍ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ವಿವಿಧ ರೀತಿಯ ಕಲಿಕಾ ಸಾಮರ್ಥ್ಯ, ಸ್ಪರ್ಧೆ ಮತ್ತು ಕೌಶಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುಲು ಅವಕಾಶವನ್ನು ಮಿನಿ ಒಲಂಪಿಕ್‍ ಕ್ರೀಡಾಕೂಟದ ಮೂಲಕ ಒದಗಿಸಿಕೊಡಲಾಗುತ್ತಿದೆ.

ಮಿನಿ ಒಲಂಪಿಕ್ ಕ್ರೀಡಾಕೂಟದ ಮುಖ್ಯ ಧ್ಯೇಯವೆಂದರೆ ಯುವ ಕ್ರೀಡಾಪಟುಗಳಿಗೆ ಒಲಿಂಪಿಕ್ ಕ್ರೀಡೆಯ ಮತ್ತು ಆರೋಗ್ಯಕರ ಜೀವನಶೈಲಿಯ ರಾಯಭಾರಿಗಳ್ಳನ್ನಾಗಿ ಸಿದ್ಧಪಡಿಸುವುದಾಗಿದೆ.

 

ಘಟನೆಗಳು ವೀಡಿಯೊಗಳು


 

ಕಾರ್ಯಕ್ರಮಗಳ ವೇಳಾಪಟ್ಟಿ


  • ಉದ್ಘಾಟನೆ


  • ಶ್ರೀ ಕಂಠೀರವ ಕ್ರೀಡಾಂಗಣ
    ಬೆಂಗಳೂರು
    ಮೇ 16ನೇ, 2022

  • ಗಮನಿಸಿ: ಹೆಚ್ಚಿನ ವಿವರಗಳಿಗಾಗಿ (ಕೆಳಗಿನ) ಕ್ರೀಡೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ.

  • ಬೆಂಗಳೂರು
    ವೇಳಾಪಟ್ಟಿ


    • ಆರ್ಚರಿ 
      ಶ್ರೀ ಕಂಠೀರವ ಕ್ರೀಡಾಂಗಣ 200 ಮೀಟರ್ ಟ್ರ್ಯಾಕ್
      16 ರಿಂದ 17ನೇ ಮೇ 2022

      ಬಾಕ್ಸಿಂಗ್ 
      ಶ್ರೀ ಕಂಠೀರವ ಕ್ರೀಡಾಂಗಣ, ಬಾಕ್ಸಿಂಗ್ ಅಖಾಡ
      16 ರಿಂದ 17ನೇ ಮೇ 2022

      ಜಿಮ್ನಾಸ್ಟಿಕ್ಸ್ 
      ಗೋಪಾಲನ್ ಕ್ರೀಡಾ ಕೇಂದ್ರ ವೈಟ್‌ಫೀಲ್ಡ್
      17 ರಿಂದ 19ನೇ ಮೇ 2022

      ಖೋ-ಖೋ 
      ವಿದ್ಯಾನಗರ ಕ್ರೀಡಾ ಸಂಕೀರ್ಣ
      18 ರಿಂದ 20ನೇ ಮೇ 2022

      ಈಜು 
      ಬಸವನಗುಡಿ ಈಜುಕೊಳ
      17 ರಿಂದ 18ನೇ ಮೇ 2022

      ವುಷು 
      ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ
      16 ರಿಂದ 17ನೇ ಮೇ 2022

    • ಅಥ್ಲೆಟಿಕ್ಸ್ 
      ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣ
      19 ರಿಂದ 21ನೇ ಮೇ 2022

      ಸೈಕ್ಲಿಂಗ್ 
      ನೈಸ್ ರಸ್ತೆ, ಬೆಂಗಳೂರು
      17 ರಿಂದ 18ನೇ ಮೇ2022

      ಹ್ಯಾಂಡ್‌ಬಾಲ್ 
      ವಿದ್ಯಾನಗರ ಕ್ರೀಡಾ ಸಂಕೀರ್ಣ
      20 ರಿಂದ 22ನೇ ಮೇ 2022

      ಲಾನ್ ಟೆನ್ನಿಸ್ 
      ಕೆಎಸ್ಎಲ್ ಟಿಎ ಕ್ರೀಡಾಂಗಣ & ಶ್ರೀ ಕಂಠೀರವ ಕ್ರೀಡಾಂಗಣ
      16 ರಿಂದ 20ನೇ ಮೇ 2022

      ಟೇಬಲ್ ಟೆನ್ನಿಸ್ 
      ಶ್ರೀ ಕಂಠೀರವ ಕ್ರೀಡಾಂಗಣ ಟೇಬಲ್ ಟೆನ್ನಿಸ್ ಹಾಲ್
      16 ರಿಂದ 19ನೇ ಮೇ 2022

    • ಬ್ಯಾಡ್ಮಿಂಟನ್ 
      ಶ್ರೀ ಕಂಠೀರವ ಕ್ರೀಡಾಂಗಣ, ಬ್ಯಾಡ್ಮಿಂಟನ್ ಹಾಲ್
      18 ರಿಂದ 20ನೇ ಮೇ 2022

      ಫೆನ್ಸಿಂಗ್ 
      ಶ್ರೀ ಕಂಠೀರವ ಕ್ರೀಡಾಂಗಣ, ಫೆನ್ಸಿಂಗ್ ಹಾಲ್
      17 ರಿಂದ 19ನೇ ಮೇ 2022

      ಹಾಕಿ 
      ಕೆ.ಎಂ.ಕಾರಿಯಪ್ಪ ಹಾಕಿ ಕ್ರೀಡಾಂಗಣ
      16 ರಿಂದ 22ನೇ ಮೇ 2022

      ನೆಟ್ಬಾಲ್ 
      ವಿದ್ಯಾನಗರ ಕ್ರೀಡಾ ಸಂಕೀರ್ಣ
      16 ರಿಂದ 18ನೇ ಮೇ 2022

      ಟೇಕ್ವಾಂಡೋ 
      ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ
      20 ರಿಂದ 21ನೇ ಮೇ 2022

    • ಬಾಸ್ಕೆಟ್‌ಬಾಲ್ 
      ಶ್ರೀ ಕಂಠೀರವ ಕ್ರೀಡಾಂಗಣ, ಬಾಸ್ಕೆಟ್‌ಬಾಲ್ ಮೈದಾನ
      18 ರಿಂದ 21ನೇ ಮೇ 2022

      ಫುಟ್ಬಾಲ್ 
      ಕೆ.ಎಸ್.ಎಫ್.ಎ ಫುಟ್ಬಾಲ್ ಕ್ರೀಡಾಂಗಣ, ಬೆಂಗಳೂರು
      17 ರಿಂದ 20ನೇ ಮೇ 2022

      ಜುಡೋ 
      ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ
      18 ರಿಂದ 19 ನೇ ಮೇ 2022

      ರೈಫಲ್ ಷೂಟಿಂಗ್ 
      ಸಾಯಿ ದಕ್ಷಿಣ ಕೇಂದ್ರ, ಬೆಂಗಳೂರು
      17 ರಿಂದ 21 ನೇ ಮೇ 2022

      ಭಾರ ಎತ್ತುವಿಕೆ 
      ಶ್ರೀ ಕಂಠೀರವ ಕ್ರೀಡಾಂಗಣ
      17 ರಿಂದ 19 ನೇ ಮೇ 2022

  • ಮುಕ್ತಾಯ ಸಮಾರಂಭ


  • ಶ್ರೀ ಕಂಠೀರವ ಕ್ರೀಡಾಂಗಣ
    ಬೆಂಗಳೂರು
      ಮೇ 22ನೇ 2022

ನಮ್ಮನ್ನು ಸಂಪರ್ಕಿಸಿ