• ARCHERY

    Sri Kanteerava Stadium 200 mtrs track 16th & 17th May 2022

    ಬಿಲ್ಲುಸ್ಪರ್ಧೆ: ಇದರಲ್ಲಿ ಸ್ಪರ್ಧಾಳು ಬಿಲ್ಲಿನ ದಾರದಲ್ಲಿ ಬಾಣವನ್ನು ಹೂಡಿ, ಯಾವುದೆ ಯಾಂತ್ರಿಕ ಉಪಕರಣಗಳ ಸಹಾಯವಿಲ್ಲದೆ ಕೇವಲ ದಾರವನ್ನು ಹಿಮ್ಮುಖವಾಗಿ ಜಗ್ಗಿ ಅದರಲ್ಲಿ ಹೂಡಿದ ಬಾಣವನ್ನು ಗುರಿಯೆಡೆಗೆ ಬಿಡುವುದೆ ಬಿಲ್ಲುವಿದ್ಯೆ ಅಥವಾ ಧನುರ್ವಿದ್ಯೆಯಾಗಿದೆ. ಆಂಗ್ಲದಲ್ಲಿ ಆರ್ಚರಿ ಎಂದು ಕರೆಯಲಾಗುವ ಇದನ್ನು ಹಿಂದೆ ಬೇಟೆಯಾಡಲು ಹಾಗೂ ಯುದ್ಧದಲ್ಲಿ ಬಳಸುತ್ತಿದ್ದರು. ಪ್ರಸ್ತುತ ಸಮಯದಲ್ಲಿ ಮುಖ್ಯವಾಗಿ ಇದೊಂದು ಆಟದ ಸ್ಪರ್ಧೆ ಹಾಗೂ ಮನರಂಜನಾತ್ಮಕ ಚಟುವಟಿಕೆಯಾಗಿದೆ. ಮೊದಲೆ ನಿಗದಿತ ಗುರಿಯನ್ನು ನಿರ್ಧರಿಸಿ ಬಾಣ ಬಿಡುವ ಸ್ಥಳದಿಂದ ಗುರಿಯಿರುವ ಬೋರ್ಡ್ ಮೇಲಿರುವ ಸುವರ್ಣ ಸಂಕೇತದಿಂದ ಕೆಳಮುಖವಾಗಿ ಚಲಿಸಿ ಸಿಗುವ ಭೂಮಿಯ ಅಳತೆಯನ್ನು ಕರಾರುವಕ್ಕಾಗಿ ಅಳೆಯುತ್ತಾರೆ. 90/70/60 ಮೀ. ಗಳ ಸ್ಪರ್ಧಾ ಅಂಗಳದಲ್ಲಿ ಸಹಿಷ್ಣುತೆಯ ಪ್ರಮಾಣ 30 ಸೆ.ಮೀ; 50/40/30 ಮೀ. ಗಳಿಗೆ 15 ಸೆ.ಮೀ. 1900 ರಲ್ಲಿ ಪ್ಯಾರಿಸ್ ನಲ್ಲಿ ನಡೆದ ಎರಡನೇಯ ಒಲಿಂಪಿಕ್ ಕ್ರೀಡೆಗಳಲ್ಲಿ ಬಿಲ್ಲುಸ್ಪರ್ಧೆಯನ್ನು ಪರಿಚಯಿಸಲಾಯಿತು. 1978 ರ ಏಷಿಯನ್ ಗೇಮ್ಸ್ ನಲ್ಲಿ ಬಿಲ್ಲುಸ್ಪರ್ಧೆಯನ್ನು ಮೊದಲ ಬಾರಿಗೆ ಸೇರಿಸಲಾಯಿತು. ಒಲಿಂಪಿಕ್ಸ್ ನಲ್ಲಿ ಬಿಲ್ಲುಸ್ಪರ್ಧೆಯ ನಾಲ್ಕು ವಿಧಗಳಿವೆ. ಪುರುಷರ ಪ್ರತ್ಯೇಕ ವಿಭಾಗ, ಮಹಿಳೆಯರ ಪ್ರತ್ಯೇಕ ವಿಭಾಗ, ಪುರುಷರ ತಂಡ ಹಾಗೂ ಮಹಿಳೆಯರ ತಂಡ. ಈ ನಾಲ್ಕೂ ವಿಭಾಗಗಳು ರಿಕರ್ವ್ ಆರ್ಚರಿ ಪ್ರಕಾರಗಳಾಗಿದ್ದು ವರ್ಲ್ಡ್ ಆರ್ಚರಿಯಿಂದ ಅನುಮೋದಿತವಾದ 70 ಮೀ. ಅಂತರ ಹಾಗೂ ನಿಯಮಗಳು ಅಡಿಯಲ್ಲಿ ನಡೆಯುತ್ತವೆ. ಆರ್ಚರಿ ಒಲಿಂಪಿಕ್ ರೌಂಡ್ ಮೂಲಕ ಪ್ರತಿ ಸ್ಪರ್ಧೆಯಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಇದರಲ್ಲಿ ಉತ್ತಮವಾದ ಐದು ಸೆಟ್ ಗಳಿದ್ದು ಪ್ರತಿ ಸೆಟ್ ನಲ್ಲಿ ಮೂರು ಬಾಣಗಳಿರುತ್ತವೆ.



  • More information


    Competition Director(s): B M Anil Kumar, 9632419333 (M) [Karnataka Amateur Archery Association]